Health & Environment
ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಸೆಪ್ಟೆಂಬರ್ 26ರ ಅಂಕಿಅಂಶಗಳು

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ: ಸೆಪ್ಟೆಂಬರ್ 26ರ ಅಂಕಿಅಂಶಗಳು

oneindia15h
THE BRIEF
1

ರಾಜ್ಯದಲ್ಲಿ ವರುಣನ ಆರ್ಭಟ ಸಂಪೂರ್ಣ ತಗ್ಗಿದ್ದು ಬಹುತೇಕ ಜಿಲ್ಲೆಗಳಲ್ಲಿ ಬಿಸಿಲು ಮುಂದುವರೆದಿದ್ದರೂ, ಅಲ್ಲಲ್ಲಿ ಕೆಲಭಾಗಗಳಲ್ಲಿ ಮಾತ್ರ ಮಳೆಯಾಗುತ್ತಿರುವುದರಿಂದ ಜಲಾಶಯಗಳಿಗೆ ಅಲ್ಪ ಪ್ರಮಾಣದ ಒಳಹರಿವು ಮುಂದುವರೆದಿದೆ.

2

ಸೆಪ್ಟೆಂಬರ್ 26ರ ಅಂಕಿಅಂಶಗಳ ಪ್ರಕಾರ ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಿದ್ದು, ಪ್ರಸ್ತುತ ನೀರಿನ ಮಟ್ಟ 105.56 ಅಡಿಗಳಿಗೆ ತಲುಪಿದೆ ಹಾಗೂ 1,907 ಕ್ಯೂಸೆಕ್ ಒಳಹರಿವು ಇದೆ.

3

ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 1,624.78 ಅಡಿಯಷ್ಟಿದ್ದು ಒಳಹರಿವು ಇಲ್ಲದೆ 9,111 ಕ್ಯೂಸೆಕ್ ಹೊರಹರಿವು ದಾಖಲಾಗಿದೆ, ಹಾಗೆಯೇ ಆಲಮಟ್ಟಿ ಡ್ಯಾಂನಲ್ಲಿ ನೀರಿನ ಮಟ್ಟ 518.87 ಮೀಟರ್ ಇದೆ.