
ನವದೆಹಲಿಯಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್, ಬಲಶಾಲಿಯೇ ಸರಿ ಎನ್ನುವ ಧೋರಣೆಯನ್ನು ಅಲ್ಲಗಳೆದು ಯಾವುದೇ ದೇಶದ ಗಾತ್ರ ಅಥವಾ ಸಾಮರ್ಥ್ಯ ಏನೇ ಇರಲಿ ಎಲ್ಲವೂ ಸಮಾನವೆಂದು ಪ್ರತಿಪಾದಿಸಿದರು.
ಕೃತಕ ಬುದ್ಧಿಮತ್ತೆ ವಲಯದಲ್ಲಿ ಮುಕ್ತ ವ್ಯವಸ್ಥೆ ನಿರ್ಮಿಸಲು ಮುಂದಾದ ಅವರು, ಬ್ರಿಕ್ಸ್ ಎಐ ಓಪನ್ ಸೋರ್ಸ್ ಕಮ್ಯೂನಿಟಿ ನಿರ್ಮಾಣ, ಎಐ ತರಬೇತಿ ಮತ್ತು ವಿಶೇಷ ಆರ್ಥಿಕ ವಲಯ ಪಾಲುದಾರಿಕೆ ಸೇರಿದಂತೆ ಐದು ಪ್ರಮುಖ ಉಪಕ್ರಮಗಳನ್ನು ಘೋಷಿಸಿದರು.
ಜಾಗತಿಕ ಆಡಳಿತದಲ್ಲಿ ಸಮಾನತೆಗಾಗಿ ಏಕಪಕ್ಷೀಯ ನಿರ್ಬಂಧಗಳನ್ನು ಬ್ರಿಕ್ಸ್ ರಾಷ್ಟ್ರಗಳು ಜಂಟಿಯಾಗಿ ವಿರೋಧಿಸಬೇಕು ಎಂದ ಅವರು, ವಿಶ್ವ ಸಂಸ್ಥೆ ಕೇಂದ್ರಿತ ಅಂತರರಾಷ್ಟ್ರೀಯ ವ್ಯವಸ್ಥೆಯನ್ನು ಬಲಪಡಿಸುವಂತೆ ಕರೆ ನೀಡಿದರು.