
ನ್ಯೂಜಿಲೆಂಡ್ನ ಅನುಭವಿ ಬೌಲರ್ ಟ್ರೆಂಟ್ ಬೌಲ್ಟ್ ತಮ್ಮ 17 ವರ್ಷಗಳ ಟಿ20 ವೃತ್ತಿಜೀವನದಲ್ಲಿ ಮೊದಲ ಬಾರಿಗೆ 5 ವಿಕೆಟ್ ಕಬಳಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್ನಲ್ಲಿ ಎಡಿನ್ಬರ್ಗ್ ಕ್ಯಾಸಲ್ ರಾಕರ್ಸ್ ಪರ ಆಡಿದ ಬೌಲ್ಟ್, ಗ್ಲ್ಯಾಸ್ಗೋ ಕಾಸ್ಮಿಕ್ಸ್ ವಿರುದ್ಧ 4 ಓವರ್ಗಳಲ್ಲಿ 24 ರನ್ ನೀಡಿ 5 ವಿಕೆಟ್ ಪಡೆದರು.
ಒಟ್ಟು 316 ಟಿ20 ಪಂದ್ಯಗಳನ್ನು ಆಡಿರುವ ಬೌಲ್ಟ್, ಈ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದು, ತಂಡದ ಸುಲಭ ಗೆಲುವಿಗೆ ಕಾರಣರಾದರು.