Indian Politics
ಸಚಿವ ನಾಗೇಂದ್ರ ಅವರ ಜಾಮೀನು ಷರತ್ತು ರದ್ದುಗೊಳಿಸಿದ ಹೈಕೋರ್ಟ್

ಸಚಿವ ನಾಗೇಂದ್ರ ಅವರ ಜಾಮೀನು ಷರತ್ತು ರದ್ದುಗೊಳಿಸಿದ ಹೈಕೋರ್ಟ್

prajavani1h
THE BRIEF
1

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಆರೋಪಿಯಾಗಿರುವ ಸಚಿವ ಬಿ. ನಾಗೇಂದ್ರ ಅವರು ಪೂರ್ವಾನುಮತಿ ಇಲ್ಲದೆ ರಾಜ್ಯ ಬಿಟ್ಟು ತೆರಳುವಂತಿಲ್ಲ ಎಂಬ ಸೆಷನ್ಸ್ ನ್ಯಾಯಾಲಯದ ಷರತ್ತನ್ನು ಹೈಕೋರ್ಟ್ ರದ್ದುಪಡಿಸಿದೆ.

2

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಸಚಿವರಾಗಿರುವ ನಾಗೇಂದ್ರ ಅವರು ಅಧಿಕೃತ ಕೆಲಸಗಳಿಗಾಗಿ ರಾಜ್ಯದ ಗಡಿ ಮೀರಿ ತೆರಳಬೇಕಾಗುವುದರಿಂದ ಈ ಷರತ್ತು ಅವರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.

3

ಆದರೆ, ವಿಚಾರಣಾ ನ್ಯಾಯಾಲಯ ಅಥವಾ ಹೈಕೋರ್ಟ್ ಅನುಮತಿಯಿಲ್ಲದೆ ನಾಗೇಂದ್ರ ಅವರು ದೇಶ ಬಿಟ್ಟು ತೆರಳುವಂತಿಲ್ಲ ಎಂಬ ನಿರ್ಬಂಧವನ್ನು ನ್ಯಾಯಾಲಯವು ಮುಂದುವರಿಸಿದೆ.