
ನಟ ಅಲ್ಲು ಅರ್ಜುನ್ ಅವರು ಪ್ರತಿಷ್ಠಿತ 'ಫೋರ್ಬ್ಸ್ ಇಂಡಿಯಾ' ನಿಯತಕಾಲಿಕೆಯ 'ಶೋಸ್ಟಾಪರ್ಸ್ 2026' ವಿಶೇಷ ಆವೃತ್ತಿಯ ಮುಖಪುಟದಲ್ಲಿ ಕವರ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ.
ಪುಷ್ಪ ಸರಣಿಯ ಸಿನಿಮಾಗಳ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿರುವ ಅಲ್ಲು ಅರ್ಜುನ್, ಪ್ರಸ್ತುತ ಅಟ್ಲಿ ನಿರ್ದೇಶನದ 'ರಾಕಾ' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಜೊತೆ ನಟಿಸುತ್ತಿದ್ದಾರೆ.
ಬೃಹತ್ ಬಜೆಟ್ನ ಈ ಸೈನ್ಸ್-ಫಿಕ್ಷನ್ ಆಕ್ಷನ್ ಡ್ರಾಮಾದಲ್ಲಿ ಹಾಲಿವುಡ್ ಮಟ್ಟದ ತಾಂತ್ರಿಕತೆ ಮತ್ತು ವಿಎಫ್ಎಕ್ಸ್ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಇದು ಅವರ ವೃತ್ತಿಜೀವನದ ಪ್ರಮುಖ ಹೆಜ್ಜೆಯಾಗಿದೆ.