
ಮುಂಬೈನ ಜಿಎಸ್ಬಿ ಸೇವಾ ಮಂಡಲದ 72ನೇ ವರ್ಷದ ಗಣಪತಿ ಉತ್ಸವಕ್ಕೆ ದಾಖಲೆಯ 703.27 ಕೋಟಿ ರೂಪಾಯಿಗಳ ವಿಮಾ ರಕ್ಷಣೆಯನ್ನು ಒದಗಿಸಲಾಗಿದೆ.
ಮಹಾ ಗಣಪತಿಯ ಮೂರ್ತಿಯನ್ನು 66 ಕೆಜಿ ಚಿನ್ನ ಮತ್ತು 335 ಕೆಜಿ ಬೆಳ್ಳಿಯ ಆಭರಣಗಳಿಂದ ಶೃಂಗರಿಸಲಾಗುತ್ತಿದ್ದು, ಸೆಪ್ಟೆಂಬರ್ 14 ರಿಂದ 18 ರವರೆಗೆ ಮುಖ್ಯ ಉತ್ಸವ ನಡೆಯಲಿದೆ.
ಈ ಐದು ದಿನಗಳ ಉತ್ಸವದಲ್ಲಿ ಪ್ರತಿದಿನ ಸುಮಾರು 40,000 ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿದ್ದು, ಒಟ್ಟು 2 ಲಕ್ಷಕ್ಕೂ ಅಧಿಕ ಭಕ್ತರು ಅನ್ನಸಂತರ್ಪಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.