
ಬೆಳಗಾವಿಯಲ್ಲಿ 2500 ಮತದಾರರ ಹೆಸರು ಡಿಲೀಟ್ ಮಾಡಲು ಕೋರಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಪತ್ರ ಬರೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದರು.
ಹರಿಪ್ರಸಾದ್ ಆರೋಪಕ್ಕೆ ತಿರುಗೇಟು ನೀಡಿರುವ ಶಾಸಕ ಅಭಯ್ ಪಾಟೀಲ್, ತಾನು ಹೆಸರು ಡಿಲೀಟ್ ಮಾಡಲು ಪತ್ರ ನೀಡಿಲ್ಲ ಬದಲಾಗಿ ಬಿಎಲ್ಒ 2 ನೀಡಿರುವ ವರದಿ ಪರಿಶೀಲನೆಗೆ ಮಾತ್ರ ಹೇಳಿರುವುದಾಗಿ ಸ್ಪಷ್ಟಪಡಿಸಿದರು.
ಬೂತ್ ಮಟ್ಟದಲ್ಲಿ ಸತ್ತವರ ಹೆಸರಿನಲ್ಲಿ ಬೋಗಸ್ ನಮೂದುಗಳಿದ್ದು, ಈ ಕುರಿತು ಮುಖ್ಯ ಚುನಾವಣಾ ಅಧಿಕಾರಿಯನ್ನು ಖುದ್ದು ಭೇಟಿಯಾಗಿ ಮುಂದಿನವಾರ ದೆಹಲಿಗೆ ತೆರಳಿ ದಾಖಲೆ ಒದಗಿಸುವುದಾಗಿ ತಿಳಿಸಿದರು.