
ದೇಶದ ಹಲವು ರೈಲು ನಿಲ್ದಾಣಗಳ ವಾಟರ್ ಕೂಲರ್ಗಳಲ್ಲಿ ಇ–ಕೋಲಿ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಇದು ಭೇದಿ ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಸಿಎಜಿ ವರದಿ ತಿಳಿಸಿದೆ.
2022–23ರಲ್ಲಿ 49 ಮತ್ತು 2023–24ರಲ್ಲಿ 56 ರೈಲು ನಿಲ್ದಾಣಗಳ ನೀರಿನ ಮಾದರಿಗಳಲ್ಲಿ ಈ ಬ್ಯಾಕ್ಟೀರಿಯಾ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಧ್ಯಯನ ನಡೆಸಿದ 512 ನಿಲ್ದಾಣಗಳ ಪೈಕಿ 458 ನಿಲ್ದಾಣಗಳಲ್ಲಿ ಕನಿಷ್ಠ ಅಗತ್ಯ ಸೌಲಭ್ಯಗಳ ಕೊರತೆ ಇರುವುದು ಸಿಎಜಿ ತಪಾಸಣೆಯಲ್ಲಿ ಬೆಳಕಿಗೆ ಬಂದಿದೆ.