
ನೇಪಾಳದ ರಸುವಾ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಇದುವರೆಗೆ 16 ಜನರು ಮೃತಪಟ್ಟಿದ್ದು, 105 ಭಾರತೀಯರು ಸೇರಿದಂತೆ ಒಟ್ಟು 400 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪ್ರವಾಸೋದ್ಯಮ ಮಂಡಳಿ ತಿಳಿಸಿದೆ.
ಟಿಬೆಟ್ ಗಡಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಉಂಟಾದ ಈ ಪ್ರವಾಹದಿಂದ ರಸುವಾ, ಧಾಡಿಂಗ್ ಮತ್ತು ನುವಾಕೋಟ್ ಜಿಲ್ಲೆಗಳು ತೀವ್ರವಾಗಿ ಬಾಧಿತವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ನೇಪಾಳ ಸೇನೆ ಧಾವಿಸಿದೆ.
ನಾಪತ್ತೆಯಾದವರಲ್ಲಿ ಅಮೆರಿಕದ 3, ಮಲೇಷ್ಯಾದ 17, ಯುಕೆಯ 12, ದಕ್ಷಿಣ ಆಫ್ರಿಕಾದ 4, ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ಸ್ನ ತಲಾ ಒಬ್ಬರು ಸೇರಿದ್ದು, ಭಾರತ ಸರ್ಕಾರ ಪರಿಹಾರ ಸಾಮಗ್ರಿ ಕಳುಹಿಸಲು ಸಿದ್ಧತೆ ನಡೆಸಿದೆ.