
2006ರ ಏಪ್ರಿಲ್ 1ಕ್ಕೂ ಮೊದಲು ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದ ಹುದ್ದೆಗಳಿಗೆ ನೇಮಕಗೊಂಡಿರುವ 3,773 ಶಿಕ್ಷಕರನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಹಳೆ ಪಿಂಚಣಿ ಯೋಜನೆಗೆ ಸೇರಿಸಲು ಸರ್ಕಾರ ನಿರ್ಧರಿಸಿದೆ.
ಅರ್ಹ ಶಿಕ್ಷಕರನ್ನು ಗುರುತಿಸಲು ಅವರ ಸೇವಾ ಪುಸ್ತಕ ಮತ್ತು ನೇಮಕಾತಿ ಅಧಿಸೂಚನೆಯ ದಿನಾಂಕ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಲು ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ.
ಈ ನಿರ್ಧಾರದಿಂದಾಗಿ NPS ವ್ಯಾಪ್ತಿಯಲ್ಲಿದ್ದ ಶಿಕ್ಷಕರಿಗೆ ನಿವೃತ್ತಿ ನಂತರದ ಆರ್ಥಿಕ ಭದ್ರತೆ ದೊರೆಯಲಿದ್ದು, ದೀರ್ಘಕಾಲದ ಬೇಡಿಕೆಗೆ ಪರಿಹಾರ ಸಿಕ್ಕಂತಾಗಿದೆ.