
ದುಬೈನಲ್ಲಿ ನಡೆದ ಮಹಿಳಾ ಟಿ20 ಏಷ್ಯಾಕಪ್ನ 9ನೇ ಪಂದ್ಯದಲ್ಲಿ ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ಕೇವಲ 55 ರನ್ಗಳಿಗೆ ಆಲೌಟ್ ಆಗಿದೆ.
ಪಾಕಿಸ್ತಾನದ ಪರ ಮುನೀಬಾ ಅಲಿ ಮತ್ತು ಶಾವಾಲ್ ಜುಲ್ಫಿಕರ್ ಮಾತ್ರ ಎರಡಂಕಿ ತಲುಪಿದರೆ, ಭಾರತದ ಶ್ರೀಚರಣಿ ಮತ್ತು ಪ್ರೇಮಾ ರಾವತ್ ತಲಾ 3 ವಿಕೆಟ್ ಪಡೆದು ಮಿಂಚಿದರು.
ಭಾರತದ ದೀಪ್ತಿ ಶರ್ಮಾ 2 ವಿಕೆಟ್ ಕಬಳಿಸಿದರೆ, ಪಾಕಿಸ್ತಾನದ ಮೂವರು ಆಟಗಾರ್ತಿಯರು ಖಾತೆ ತೆರೆಯದೆಯೇ ಪೆವಿಲಿಯನ್ ಸೇರಿದರು.