
ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯ ಚಿಲಕಲೂರಿಪೇಟೆಯಲ್ಲಿ ಗುರುವಾರ ತಡರಾತ್ರಿ ಖಾಸಗಿ ಬಸ್ ಮತ್ತು ಆಟೊರಿಕ್ಷಾ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಅಪಘಾತದಲ್ಲಿ ಆರು ಮಂದಿ ಗಾಯಗೊಂಡಿದ್ದು, ಮೃತಪಟ್ಟವರೆಲ್ಲರೂ ಚಿಲಕಲೂರಿಪೇಟ ಮಂಡಲದ ವೇಲೂರು ಗ್ರಾಮದವರು ಎಂದು ನರಸರಾವುಪೇಟ ಡಿವೈಎಸ್ಪಿ ಎಂ. ಹನುಮಂತ ರಾವ್ ತಿಳಿಸಿದ್ದಾರೆ.
ತಿರುಪತಿ ಕಡೆಗೆ ತೆರಳುತ್ತಿದ್ದ ಬಸ್ ಮತ್ತು ವಿರುದ್ಧ ದಿಕ್ಕಿನಲ್ಲಿ ಬಂದ ಆಟೊ ನಡುವೆ ಕಲಾಮಂದಿರ ಜಂಕ್ಷನ್ ಬಳಿ ಅಪಘಾತ ಸಂಭವಿಸಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.