
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಕಬಿನಿ ಜಲಾಶಯದಿಂದ ತಮಿಳುನಾಡಿಗೆ 25,000 ಕ್ಯುಸೆಕ್ಸ್ ನೀರು ಬಿಡಲಾಗಿದೆ.
ಆಗಸ್ಟ್ 4ರಂದು ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 102.09 ಅಡಿಗಳಿಗೆ ತಲುಪಿದ್ದು, ಒಳಹರಿವು 32,048 ಕ್ಯುಸೆಕ್ಸ್ ದಾಖಲಾಗಿದೆ.
ತುಂಗಭದ್ರಾ ಜಲಾಶಯಕ್ಕೆ 57,785 ಕ್ಯುಸೆಕ್ಸ್ ಮತ್ತು ಆಲಮಟ್ಟಿ ಜಲಾಶಯಕ್ಕೆ 1,25,855 ಕ್ಯುಸೆಕ್ಸ್ ಒಳಹರಿವು ದಾಖಲಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.