
ವಿದೇಶಿ ಹೂಡಿಕೆದಾರರು (ಎಫ್ಪಿಐ) ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ಭಾರತೀಯ ಷೇರುಪೇಟೆಯಲ್ಲಿ ನಿವ್ವಳ ₹16,621 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಕಂಪನಿಗಳ ಉತ್ತಮ ಗಳಿಕೆ, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತದ ನಿರೀಕ್ಷೆ ಮತ್ತು ಕಚ್ಚಾ ತೈಲ ದರ ಇಳಿಕೆಯಂತಹ ಅಂಶಗಳು ಈ ಹೂಡಿಕೆಗೆ ಉತ್ತೇಜನ ನೀಡಿವೆ.
ಜುಲೈ ತಿಂಗಳಿನಲ್ಲಿ ವಿದೇಶಿ ಹೂಡಿಕೆದಾರರು ನಿವ್ವಳ ₹20,200 ಕೋಟಿ ಹೂಡಿಕೆ ಮಾಡಿದ್ದರೆ, ಈ ವರ್ಷದ ಜನವರಿಯಿಂದ ಜೂನ್ ಅವಧಿಯಲ್ಲಿ ₹2.4 ಲಕ್ಷ ಕೋಟಿ ಬಂಡವಾಳ ಹೊರಹರಿವಾಗಿತ್ತು.