
ಇಸ್ರೋದ ಯು.ಆರ್ ರಾವ್ ಸ್ಯಾಟಲೈಟ್ ಸೆಂಟರ್ (URSC) ನೂತನ ನಿರ್ದೇಶಕರಾಗಿ ಖ್ಯಾತ ವಿಜ್ಞಾನಿ ದಿನೇಶ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.
1989ರಲ್ಲಿ ಇಸ್ರೋ ಸೇರಿದ ದಿನೇಶ್ ಕುಮಾರ್ ಸಿಂಗ್ ಅವರು 35 ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದು, ಈ ಹಿಂದೆ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ನಿವೃತ್ತರಾದ ಎಂ. ಶಂಕರನ್ ಅವರಿಂದ ಅಧಿಕಾರ ಸ್ವೀಕರಿಸಿರುವ ಸಿಂಗ್, ಭಾರತದ ಬಾಹ್ಯಾಕಾಶ ನಿಲ್ದಾಣ ನಿರ್ಮಾಣ ಮತ್ತು ಉಪಗ್ರಹ ಉಡಾವಣೆಗಳ ಮಹತ್ವದ ಯೋಜನೆಗಳ ನೇತೃತ್ವ ವಹಿಸಲಿದ್ದಾರೆ.