
ಸೆಪ್ಟೆಂಬರ್ 6ರಂದು ಆರಂಭವಾಗಲಿರುವ ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ ಕಿಚ್ಚ ಸುದೀಪ್ ಅವರು ಫ್ಲೈಟ್ ಕ್ಯಾಪ್ಟನ್ ವೇಷದಲ್ಲಿ ಪ್ರವೇಶಿಸಿದ್ದಾರೆ.
ಸ್ಪರ್ಧಿಗಳು ಬರುವ ಮುನ್ನವೇ ಸುದೀಪ್ ಅವರು ಮನೆಯ ಒಳಗೆ ಹೋಗಿ ಈ ಬಾರಿ ಮಾಡಲಾಗಿರುವ ಬದಲಾವಣೆಗಳನ್ನು ವೀಕ್ಷಿಸಿ ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ.
ಈ ಕುರಿತ ಪ್ರೋಮೊ ಈಗಾಗಲೇ ಬಿಡುಗಡೆಯಾಗಿದ್ದು, ಸುದೀಪ್ ಅವರು ನಾಳೆ ಸಂಜೆ ಅಧಿಕೃತವಾಗಿ ಸ್ಪರ್ಧಿಗಳನ್ನು ಮನೆಗೆ ಸ್ವಾಗತಿಸಲಿದ್ದಾರೆ.