
ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹20 ಸಾವಿರ ಕೋಟಿಗೂ ಅಧಿಕ ಲಾಭ ಗಳಿಸುವ ವಿಶ್ವಾಸದಲ್ಲಿದೆ ಎಂದು ಸಿಇಒ ಅಶೋಕ್ ಚಂದ್ರ ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ₹16,904 ಕೋಟಿ ಲಾಭ ಗಳಿಸಿದ್ದು, ಪ್ರಸಕ್ತ ವರ್ಷದ ಜೂನ್ ತ್ರೈಮಾಸಿಕದಲ್ಲಿ ಈಗಾಗಲೇ ₹5 ಸಾವಿರ ಕೋಟಿ ಲಾಭ ದಾಖಲಿಸಿದೆ.
ಈ ವರ್ಷ ಬ್ಯಾಂಕ್ನ ಸಾಲ ನೀಡುವಿಕೆ ಶೇ 12ರಿಂದ ಶೇ 13ರಷ್ಟು ಮತ್ತು ಠೇವಣಿ ಸಂಗ್ರಹ ಶೇ 9ರಿಂದ ಶೇ 10ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.