
ಎಲ್‌ಪಿಜಿ ಗ್ರಾಹಕರು ಸಬ್ಸಿಡಿ ಪಡೆಯುವುದನ್ನು ಮುಂದುವರಿಸಲು ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಗಸ್ಟ್ 23 ಅಂತಿಮ ದಿನವಾಗಿದೆ.
ಇಂಡೇನ್, ಎಚ್‌ಪಿ ಮತ್ತು ಭಾರತ್ ಗ್ಯಾಸ್ ಬಳಕೆದಾರರು ತಮ್ಮ ಗ್ಯಾಸ್ ಕಂಪನಿಯ ಅಧಿಕೃತ ಆ್ಯಪ್ ಅಥವಾ ಹತ್ತಿರದ ವಿತರಕರ ಕಚೇರಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಥೆಂಟಿಕೇಶನ್ ಮಾಡಿಸುವುದು ಕಡ್ಡಾಯವಾಗಿದೆ.
ನಿಗದಿತ ಸಮಯದೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಸರ್ಕಾರದ ಸಬ್ಸಿಡಿ ತಕ್ಷಣವೇ ಸ್ಥಗಿತಗೊಳ್ಳಲಿದ್ದು, ಗ್ರಾಹಕರು ಮಾರುಕಟ್ಟೆ ದರದಲ್ಲಿ ಸಿಲಿಂಡರ್ ಖರೀದಿಸಬೇಕಾಗುತ್ತದೆ ಎಂದು ಕಂಪನಿಗಳು ಎಚ್ಚರಿಸಿವೆ.