
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ (POMIS) ಪ್ರಸ್ತುತ ಶೇ. 7.4 ರಷ್ಟು ಬಡ್ಡಿ ದರ ನೀಡಲಾಗುತ್ತಿದ್ದು, ಜಂಟಿ ಖಾತೆಯಲ್ಲಿ ₹15 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ ₹9,250 ಆದಾಯ ಪಡೆಯಬಹುದು.
ಈ ಯೋಜನೆಯ ಅವಧಿ 5 ವರ್ಷಗಳಾಗಿದ್ದು, ವೈಯಕ್ತಿಕ ಖಾತೆಗೆ ಗರಿಷ್ಠ ₹9 ಲಕ್ಷ ಮತ್ತು ಜಂಟಿ ಖಾತೆಗೆ ಗರಿಷ್ಠ ₹15 ಲಕ್ಷ ಹೂಡಿಕೆ ಮಿತಿ ನಿಗದಿಪಡಿಸಲಾಗಿದೆ.
ಖಾತೆ ತೆರೆದ 1 ವರ್ಷದವರೆಗೆ ಹಣ ಹಿಂಪಡೆಯಲು ಅವಕಾಶವಿಲ್ಲದಿದ್ದರೂ, 1 ರಿಂದ 5 ವರ್ಷದ ಅವಧಿಯಲ್ಲಿ ಖಾತೆ ಬಂದ್ ಮಾಡಿದರೆ ಠೇವಣಿ ಮೊತ್ತದಿಂದ 1% ರಿಂದ 2% ವರೆಗೆ ಕಡಿತಗೊಳಿಸಲಾಗುತ್ತದೆ.