
ದೆಹಲಿಯ ಲುಟಿಯನ್ಸ್ ವಲಯದಲ್ಲಿರುವ ಕೇಂದ್ರ ಸಚಿವರ ಸರ್ಕಾರಿ ನಿವಾಸಗಳ ನವೀಕರಣ ಮತ್ತು ದುರಸ್ತಿಗಾಗಿ 2025-26ನೇ ಸಾಲಿನಲ್ಲಿ ದಾಖಲೆಯ 92.35 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಆರ್‌ಟಿಐ ಮಾಹಿತಿಯ ಪ್ರಕಾರ, 2014-15ರಲ್ಲಿ ಈ ವೆಚ್ಚ 27.47 ಕೋಟಿ ರೂ.ಗಳಷ್ಟಿತ್ತು, ಅಂದರೆ ಕಳೆದ 11 ವರ್ಷಗಳಲ್ಲಿ ನಿರ್ವಹಣಾ ವೆಚ್ಚವು ಮೂರು ಪಟ್ಟು ಹೆಚ್ಚಾಗಿದೆ.
2014ರಿಂದ 2026ರವರೆಗೆ ಕೇಂದ್ರ ಲೋಕೋಪಯೋಗಿ ಇಲಾಖೆಯ ಮೂಲಕ ಒಟ್ಟು 547.68 ಕೋಟಿ ರೂ.ಗಳನ್ನು ಸಚಿವರ ಬಂಗಲೆಗಳ ನಿರ್ವಹಣೆಗಾಗಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.