
ಟಿವಿಎಸ್ ಗ್ರೂಪ್ನಲ್ಲಿ ಭುಗಿಲೆದ್ದಿರುವ ಆಸ್ತಿ ಮತ್ತು ಉತ್ತರಾಧಿಕಾರ ವಿವಾದದಲ್ಲಿ ವೇಣು ಶ್ರೀನಿವಾಸನ್ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯ ತಾರಕಕ್ಕೇರಿದೆ.
ವೇಣು ಶ್ರೀನಿವಾಸನ್ ಪತ್ನಿ ಮಲ್ಲಿಕಾ ಶ್ರೀನಿವಾಸನ್ ಹಾಗೂ ಪುತ್ರಿ ಲಕ್ಷ್ಮಿ ವೇಣು ಬಣವು ಮದ್ರಾಸ್ ಹೈಕೋರ್ಟ್ನಲ್ಲಿ ಉತ್ತರಾಧಿಕಾರ ದಾವೆ ಹೂಡಲು ಗಂಭೀರ ಚಿಂತನೆ ನಡೆಸಿದೆ.
ಟಿವಿಎಸ್ ಹೋಲ್ಡಿಂಗ್ಸ್ ಕಂಪನಿಯು ಟಿವಿಎಸ್ ಮೋಟಾರ್ ಕಂಪನಿಯಲ್ಲಿ ಶೇ. 50.26ರಷ್ಟು ಒಡೆತನ ಹೊಂದಿದ್ದು, ಈ ಕಾರ್ಪೊರೇಟ್ ಸಾಮ್ರಾಜ್ಯದ ಮೇಲಿನ ಹಿಡಿತಕ್ಕಾಗಿ ಈ ಕದನ ನಡೆಯುತ್ತಿದೆ.