ಬೆಂಗಳೂರು ಮೆಟ್ರೋದ ಹಳದಿ ಮಾರ್ಗಕ್ಕಾಗಿ ಕೋಲ್ಕೊತ್ತಾದ ಟಿಆರ್‌ಎಸ್‌ಎಲ್ ಕಂಪನಿ ಪೂರೈಸಿರುವ 15ನೇ ರೈಲಿನ 6 ಬೋಗಿಗಳು ಹೆಬ್ಬಗೋಡಿ ಡಿಪೋ ತಲುಪಿವೆ.
ಆರ್.ವಿ. ರಸ್ತೆ-ಬೊಮ್ಮಸಂದ್ರ ನಡುವಿನ 19.75 ಕಿ.ಮೀ. ಮಾರ್ಗದಲ್ಲಿ ಸದ್ಯ 10 ರೈಲುಗಳು ಸಂಚರಿಸುತ್ತಿದ್ದು, ಆಗಸ್ಟ್ ಅಂತ್ಯದ ವೇಳೆಗೆ 13 ರೈಲುಗಳನ್ನು ವಾಣಿಜ್ಯ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುವುದು.
ರೈಲುಗಳ ಲಭ್ಯತೆ ಹೆಚ್ಚಾಗುವುದರಿಂದ ದಟ್ಟಣೆಯ ಸಮಯದಲ್ಲಿ ಮೆಟ್ರೋ ರೈಲುಗಳ ನಡುವಿನ ಕಾಯುವ ಸಮಯವನ್ನು ಪ್ರಸ್ತುತ 7 ನಿಮಿಷಗಳಿಂದ 5 ನಿಮಿಷಕ್ಕೆ ಇಳಿಸುವ ಗುರಿ ಹೊಂದಲಾಗಿದೆ.