
ರಾಜ್ಯದಲ್ಲಿ ಅಕ್ಕಿ ಉತ್ಪಾದನೆ ಕುಸಿತ ಹಾಗೂ ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಕೇವಲ ಎರಡು ವಾರಗಳಲ್ಲಿ ಎರಡನೇ ಬಾರಿಗೆ ವಿವಿಧ ಬಗೆಯ ಅಕ್ಕಿಯ ದರ ಮತ್ತೊಮ್ಮೆ ಗಗನಕ್ಕೇರಿದೆ.
ಕೋಲಂ ಅಕ್ಕಿ ಬೆಲೆಯು ಪ್ರತಿ ಕೆಜಿಗೆ 75 ರೂ.ನಿಂದ 100 ರೂ.ಗೆ ಏರಿಕೆಯಾಗಿದ್ದರೆ, ಸೋನಾಮಸೂರಿ ಅಕ್ಕಿ 68 ರೂ.ನಿಂದ 85 ರೂ.ಗೆ ಹಾಗೂ ಜೀರಾ ಸಾಂಬ ಅಕ್ಕಿ 200 ರೂ.ಗೆ ಮಾರಾಟವಾಗುತ್ತಿದೆ.
ಮಳೆ ಕೊರತೆ ಮತ್ತು ನೀರಾವರಿ ಸಮಸ್ಯೆಯಿಂದ ಇಳುವರಿ ಕುಂಠಿತಗೊಂಡಿದ್ದು, ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರ್ತಕರು ಆತಂಕ ವ್ಯಕ್ತಪಡಿಸಿದ್ದಾರೆ.