
ಚಂಡಮಾರುತ ಪ್ರಸರಣ ಹಾಗೂ ವಿವಿಧೆಡೆ ಮುಂದುವರಿದಿರುವ ಮೇಲ್ಮೈ ವಾಯುಭಾರ ಕುಸಿತದ ಸುಳಿಗಾಳಿಯ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಇನ್ನೂ 5 ರಿಂದ 6 ದಿನಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮುಂಗಾರು ಹಿಮ್ಮೆಟ್ಟುವಿಕೆಯು ಸಕ್ರಿಯವಾಗಿದ್ದು, ಸಮುದ್ರ ಮಟ್ಟದಿಂದ ವಿವಿಧ ಎತ್ತರಗಳಲ್ಲಿ ವಾಯುಭಾರ ಕುಸಿತದ ಟ್ರಫ್‌ಗಳು ಮುಂದುವರಿದಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಳೆಯ ಹಿನ್ನೆಲೆಯಲ್ಲಿ ರಾಜ್ಯದ ಕೆಆರ್‌ಎಸ್, ಕಬಿನಿ, ಲಿಂಗನಮಕ್ಕಿ ಮತ್ತು ತುಂಗಭದ್ರಾ ಸೇರಿದಂತೆ 14 ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹಾಗೂ ಒಳ-ಹೊರಹರಿವಿನ ವಿವರಗಳನ್ನು ಹವಾಮಾನ ವರದಿಯಲ್ಲಿ ನೀಡಲಾಗಿದೆ.