
2026ರ ಸಾಲಿನ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಇಂಗ್ಲೆಂಡ್ ತಂಡದ ನಾಯಕ ಹಾಗೂ ಬಾಯರ್ನ್ ಮ್ಯೂನಿಚ್ ಆಟಗಾರ ಹ್ಯಾರಿ ಕೇನ್ ಮುಡಿಗೇರಿಸಿಕೊಂಡಿದ್ದಾರೆ.
ಫ್ರಾನ್ಸ್‌ನ ಕಿಲಿಯನ್ ಎಂಬಾಪೆ ಮತ್ತು ಸ್ಪೇನ್‌ನ ಲಾಮಿನ್ ಯಮಾಲ್ ಅವರ ತೀವ್ರ ಪೈಪೋಟಿಯನ್ನು ಹಿಂದಿಕ್ಕಿ ಕೇನ್ ಈ ಪ್ರಶಸ್ತಿ ಪಡೆದಿದ್ದಾರೆ.
ಕಳೆದ 2025-26ರ ಸೀಸನ್‌ನಲ್ಲಿ ಕ್ಲಬ್ ಮತ್ತು ದೇಶದ ಪರವಾಗಿ 73 ಗೋಲುಗಳನ್ನು ಬಾರಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದು, ಗರ್ಡ್ ಮುಲ್ಲರ್ ಟ್ರೋಫಿಯನ್ನೂ ಗೆದ್ದಿದ್ದಾರೆ.