
ಸರ್ಕಾರದ 100 ದಿನಗಳ ಪೂರೈಕೆ ಅಂಗವಾಗಿ ಕೆಎಸ್ಆರ್ಟಿಸಿ, ಎನ್ಡಬ್ಲ್ಯುಕೆಆರ್ಟಿಸಿ, ಕೆಕೆಆರ್ಟಿಸಿ ಮತ್ತು ಬಿಎಂಟಿಸಿ ಸೇವೆಗಳನ್ನು ಒಳಗೊಂಡ ಕರ್ನಾಟಕ ಮೊಬಿಲಿಟಿ ಆ್ಯಪ್ ಮತ್ತು ವಾಟ್ಸಾಪ್ ಟಿಕೆಟಿಂಗ್ ಸೌಲಭ್ಯವನ್ನು ಲೋಕಾರ್ಪಣೆಗೊಳಿಸಲಾಗಿದೆ.
ಪ್ರಯಾಣಿಕರು 6364940880 ವಾಟ್ಸಾಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಬಸ್ ಟಿಕೆಟ್ ಬುಕ್ ಮಾಡಬಹುದಾಗಿದ್ದು, ಯುಪಿಐ, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸಬಹುದು.
ಟಿಕೆಟ್ ಬುಕ್ ಮಾಡಿದ ನಂತರ ಇ-ಟಿಕೆಟ್ ವಾಟ್ಸಾಪ್ ಮತ್ತು ಇ-ಮೇಲ್ ಮೂಲಕ ಲಭ್ಯವಾಗಲಿದ್ದು, ಟಿಕೆಟ್ ರದ್ದುಪಡಿಸಲು ಪಿಎನ್ಆರ್ ಮತ್ತು ಟ್ರಾನ್ಸಾಕ್ಷನ್ ಪಾಸ್ವರ್ಡ್ ಅಗತ್ಯವಿದೆ.