
ಐತಿಹಾಸಿಕ ಹಾಸನಾಂಬ ಉತ್ಸವಕ್ಕೆ ಕಳೆದ ಬಾರಿಗಿಂತ ಸುಮಾರು 10 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅದಕ್ಕೆ ತಕ್ಕಂತೆ ಹೆಚ್ಚುವರಿ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಸಚಿವ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ.
ಈ ಬಾರಿ ಭಕ್ತರಿಗಾಗಿ ಇಸ್ಕಾನ್‌ನಿಂದ ಲಾಡು ಮಾಡಿಸಲಾಗುತ್ತಿದ್ದು, ಪೂರ್ಣ ಪ್ರಮಾಣದ ದೊನ್ನೆ ಪ್ರಸಾದ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಉತ್ಸವದ ಅಂಗವಾಗಿ ದಸರಾ ಮಾದರಿಯ ಕ್ರೀಡೋತ್ಸವ, ಜಾನುವಾರು ಪ್ರದರ್ಶನ ಹಾಗೂ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ಸೇರಿದಂತೆ ಸುಮಾರು 400 ಕುಸ್ತಿಪಟುಗಳು ಭಾಗವಹಿಸುವ ಕುಸ್ತಿ ಪಂದ್ಯಗಳನ್ನು ಹಮ್ಮಿಕೊಳ್ಳಲಾಗಿದೆ.