
ಮಂಗಳೂರಿನಿಂದ ಕೆಎಸ್ಆರ್ಟಿಸಿ ವತಿಯಿಂದ ಕಾರ್ಯಾಚರಣೆ ಮಾಡಲಾದ ವಿಶೇಷ ದಸರಾ ಪ್ರವಾಸ ಪ್ಯಾಕೇಜ್ಗಳಡಿ ಭಾನುವಾರ ಒಂದೇ ದಿನ ವಿವಿಧ ದೇಗುಲ ರೂಟ್ಗಳಲ್ಲಿ ದಾಖಲೆಯ 29 ಬಸ್ಗಳು ಸಂಚರಿಸಿವೆ.
ಕಳೆದ ಐದು ವರ್ಷಗಳ ದಸರಾ ಹೋಲಿಕೆಯಲ್ಲಿ ಕೊಲ್ಲೂರು, ಸಿಗಂದೂರು ಮತ್ತು ಮಡಿಕೇರಿ ಮಾರ್ಗಗಳಿಗೆ ಅತಿ ಹೆಚ್ಚು ಬೇಡಿಕೆ ಕಂಡುಬಂದಿದೆ ಎಂದು ಕೆಎಸ್ಆರ್ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 11 ರಿಂದ 20ರವರೆಗೆ ಲಭ್ಯವಿರುವ ಈ ವಿಶೇಷ ಪ್ಯಾಕೇಜ್ ಬಸ್ಗಳಲ್ಲಿ ಒಟ್ಟು 29 ಬಸ್ಗಳ ಮೂಲಕ ಅಂದಾಜು 1,400 ಪ್ರವಾಸಿಗರು ಪ್ರಯಾಣಿಸಿದ್ದಾರೆ.