
ಬೆಂಗಳೂರಿನ ತಾವರೆಕೆರೆಯಲ್ಲಿ ಆಗಸ್ಟ್ 18ರಂದು ಬಯಲಾದ ನಕಲಿ ಔಷಧ ಜಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯನ್ನು ವಿದೇಶಿ ಸಂಪರ್ಕಗಳಿಗೂ ವಿಸ್ತರಿಸಿದೆ. ಮಿನರ್ವಾ ಸರ್ಕಲ್ನ ಕೃಪಾ ಹೆಲ್ತ್ಕೇರ್ನಿಂದ ₹9 ಲಕ್ಷ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಪ್ರಮುಖ ಆರೋಪಿ ಆರ್. ಪ್ರಶಾಂತ್ ಅಲಿಯಾಸ್ ಪ್ರಶಾಂತ್ ರಾಜನ್ ಬಾಬು ಅವರ ಟರ್ಕಿ, ಯುಎಇ (ಶಾರ್ಜಾ) ಮತ್ತು ಅಜರ್ಬೈಜಾನ್ ದೇಶಗಳ ಹಣಕಾಸು ವ್ಯವಹಾರ ಹಾಗೂ ಪ್ರಯಾಣದ ವಿವರಗಳನ್ನು ಇಡಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಆರೋಪಿಯು ಕಡಿಮೆ ಬೆಲೆಯ ಸಾಮಾನ್ಯ ಔಷಧಗಳನ್ನು ಬಿಡದಿಯ ಫಾರ್ಮ್ಹೌಸ್ನಲ್ಲಿ ತಂದು ದುಬಾರಿ ಫೈಜರ್ ಆಂಟಿಬಯೋಟಿಕ್ ಬ್ರ್ಯಾಂಡ್ಗಳ ಹೆಸರಿನಲ್ಲಿ ಮರುಲೇಬಲ್ ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹಣ ಅಕ್ರಮ ವರ್ಗಾವಣೆ (PMLA) ಕಾಯ್ದೆಯಡಿ ಇಡಿ ಪರಿಶೀಲನೆ ನಡೆಸುತ್ತಿದೆ.