
ರಷ್ಯಾದ ಸೈಬೀರಿಯಾ ಪ್ರಾಂತ್ಯದಲ್ಲಿರುವ ಪ್ಲೇಗ್ ಸಂಶೋಧನಾ ಸಂಸ್ಥೆಯ 28 ವರ್ಷದ ಲ್ಯಾಬ್ ಟೆಕ್ನಿಷಿಯನ್ ದಾರಿಯಾ ಶಿಪಿಲೋವಾ ಅನಾರೋಗ್ಯದಿಂದ ಕೇವಲ ಎರಡೇ ದಿನಗಳಲ್ಲಿ ಹಠಾತ್ ಸಾವನ್ನಪ್ಪಿದ್ದಾರೆ.
ಈ ಘಟನೆಯ ಬಳಿಕ ರಷ್ಯಾದಲ್ಲಿ ಪ್ಲೇಗ್ ಭೀತಿ ಅಥವಾ ಸಾಂಕ್ರಾಮಿಕ ರೋಗ ಹರಡುವ ಅಪಾಯ ತೀರಾ ಕಡಿಮೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
ಮೃತ ಶಿಪಿಲೋವಾ ಅವರ ಜೊತೆ ಕೆಲಸ ಮಾಡುತ್ತಿದ್ದ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿಯನ್ನು ಇರ್ಕುಟ್ಸ್ಕ್ ನಗರದ ಸಂಶೋಧನಾ ಕೇಂದ್ರದೊಳಗೆ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.