
ಟಿಸಿಎಸ್ ಕಂಪನಿಯ ಉದ್ಯೋಗದ ಆಫರ್ ತಿರಸ್ಕರಿಸಿದ ಯುವಕನೊಬ್ಬ ರೈತರಿಂದ ನೇರವಾಗಿ ಅಕ್ಕಿ ಖರೀದಿಸಿ ವ್ಯಾಪಾರ ಆರಂಭಿಸಿ ವಾರ್ಷಿಕ 25 ಲಕ್ಷ ರೂ. ಆದಾಯ ಗಳಿಸುತ್ತಿದ್ದಾನೆ.
ಪ್ರತಿ ಕೆಜಿ ಅಕ್ಕಿಯನ್ನು 35 ರೂ.ಗೆ ರೈತರಿಂದ ಖರೀದಿಸಿ, ಪ್ಯಾಕಿಂಗ್ ಮತ್ತು ಸಾಗಣೆ ವೆಚ್ಚ ಸೇರಿ 40 ರೂ.ಗೆ ಸಿದ್ಧಪಡಿಸಿ 50 ರೂ.ಗೆ ಮಾರಾಟ ಮಾಡುತ್ತಿದ್ದಾನೆ.
ಈ ಯುವಕನ ಅಕ್ಕಿ ವ್ಯಾಪಾರದ ನೆಟ್ವರ್ಕ್ ಈಗ ಸುಮಾರು 200 ಚಿಲ್ಲರೆ ಅಂಗಡಿಗಳಿಗೆ ವಿಸ್ತರಿಸಿದ್ದು, ಪ್ರತಿ ತಿಂಗಳು 200 ಕ್ವಿಂಟಾಲ್ ಅಕ್ಕಿಯನ್ನು ಮಾರುಕಟ್ಟೆಗೆ ಪೂರೈಸುತ್ತಿದ್ದಾನೆ.