
ಅರುಣ್ ಮಾದೇಶ್ವರನ್ ನಿರ್ದೇಶನದ, ಲೋಕೇಶ್ ಕನಗರಾಜ್ ಮತ್ತು ವಮಿಕಾ ಗಬ್ಬಿ ನಟಿಸಿರುವ ‘ಡಿಸಿ’ ಸಿನಿಮಾವನ್ನು ತೆಲುಗು ನಟರಾದ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಮುಕ್ತಕಂಠದಿಂದ ಹೊಗಳಿದ್ದಾರೆ.
ಅಲ್ಲು ಅರ್ಜುನ್ ಅವರು ಈ ಚಿತ್ರವನ್ನು 'ತಮಿಳು ಕ್ಲಾಸಿಕ್' ಎಂದು ಕರೆದಿದ್ದು, ನಿರ್ದೇಶಕ ಅರುಣ್ ಮಾದೇಶ್ವರನ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಕೆಲಸವನ್ನು ಶ್ಲಾಘಿಸಿದ್ದಾರೆ.
ಸನ್ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರದ ಬಗ್ಗೆ ಮಹೇಶ್ ಬಾಬು ಅವರು ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಇದು ಬಾಕ್ಸ್ ಆಫೀಸ್ ಗಳಿಕೆಗೆ ಪೂರಕವಾಗಿದೆ.