
ಸ್ಪ್ಯಾಮ್ ಕರೆ ಮತ್ತು ನಕಲಿ ಸಂದೇಶಗಳ ಹಾವಳಿ ತಡೆಯಲು ಟೆಲಿಕಾಂ ಆಪರೇಟರ್‌ಗಳಿಗೆ ಹೆಚ್ಚಿನ ಅಧಿಕಾರ ನೀಡಿದ್ದು, ಗ್ರಾಹಕರ ದೂರು ಇಲ್ಲದಿದ್ದರೂ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ.
ಏರ್‌ಟೆಲ್, ಜಿಯೋ, ವಿಐ ಮತ್ತು ಬಿಎಸ್‌ಎನ್‌ಎಲ್ ಕಂಪನಿಗಳು ಎಐ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ಶಂಕಿತ ಸಂಖ್ಯೆಗಳನ್ನು ಪತ್ತೆ ಹಚ್ಚಿ, ಅವುಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸುವ ವಾಣಿಜ್ಯ ಸಂಸ್ಥೆಗಳು ಮತ್ತು ಟೆಲಿಕಾಂ ಆಪರೇಟರ್‌ಗಳಿಗೆ ದಂಡ ವಿಧಿಸಲಾಗುವುದು, ನಿರಂತರ ಉಲ್ಲಂಘನೆ ಮಾಡಿದರೆ ಲೈಸೆನ್ಸ್ ರದ್ದುಗೊಳಿಸಿ 2 ವರ್ಷಗಳವರೆಗೆ ಕಪ್ಪುಪಟ್ಟಿಗೆ ಸೇರಿಸಲಾಗುವುದು.