
ಮುಂಬೈನ ಕೊಲಾಬಾದಲ್ಲಿರುವ ಶತಮಾನದ ಇತಿಹಾಸವಿರುವ ಪ್ರತಿಷ್ಠಿತ ‘ಒಲಿಂಪಿಯಾ ಕಾಫಿ ಹೌಸ್’ ರೆಸ್ಟೋರೆಂಟ್‌ನಲ್ಲಿ ಗಂಭೀರ ನೈರ್ಮಲ್ಯ ಲೋಪಗಳು ಪತ್ತೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತವು ಪರವಾನಗಿಯನ್ನು ಅಮಾನತುಗೊಳಿಸಿದೆ.
ಅಧಿಕಾರಿಗಳು ನಡೆಸಿದ ಹಠಾತ್ ದಾಳಿಯ ವೇಳೆ ಆಹಾರ ಸಂಗ್ರಹಿಸುವ ಜಾಗದಲ್ಲೇ ಮೂತ್ರ ವಿಸರ್ಜನೆ ಮಾಡಿರುವುದು ಹಾಗೂ ಫ್ರಿಡ್ಜ್‌ನಲ್ಲಿ ಹಸಿ ಮಾಂಸದ ರಕ್ತದ ಕಲೆಗಳು ಪತ್ತೆಯಾಗಿವೆ.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯಡಿ ಲೈಸೆನ್ಸ್ ರದ್ದುಪಡಿಸಲಾಗಿದ್ದು, ಲೋಪಗಳನ್ನು ಸರಿಪಡಿಸಿ ಮುಂದಿನ ತಪಾಸಣೆಯಲ್ಲಿ ತೇರ್ಗಡೆಯಾಗುವವರೆಗೆ ಆಹಾರ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.