
22ನೇ ಕಾಮನ್‌ವೆಲ್ತ್ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಫೈನಲ್‌ಗೆ ಪ್ರವೇಶಿಸಿ ಮಲೇಷ್ಯಾವನ್ನು ಎದುರಿಸಲಿವೆ.
ಪುರುಷರ ತಂಡ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 3-0 ಅಂತರದಿಂದ ಗೆಲುವು ಸಾಧಿಸಿದರೆ, ಮಹಿಳೆಯರ ತಂಡ 3-1 ಅಂತರದಿಂದ ಜಯಭೇರಿ ಬಾರಿಸಿತು.
ಮಹಿಳೆಯರ ಪಂದ್ಯದಲ್ಲಿ ಶ್ರೀಜಾ ಅಕುಲಾ ಎರಡು ಬಾರಿ ಗೆದ್ದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಯಶಸ್ವಿನಿ ಘೋರ್ಪಡೆ ಸೋಲನುಭವಿಸಿದರು.