
ಬಿಹಾರದ ಪಟ್ನಾದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಂದೆಯವರ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದೆ.
ಭಾಷಣದ ವೇಳೆ ಮೋದಿ ಬೆಂಬಲಿಸಿ ಮಾತನಾಡಿದ್ದ ಸಂತೋಷ್ ಕುಮಾರ್ ಎಂಬವರನ್ನು ಕಾಂಗ್ರೆಸ್ ಬೆಂಬಲಿಗರು ಥಳಿಸಿ ಸಭಾಂಗಣದಿಂದ ಹೊರಗೆ ತಳ್ಳಿದ್ದಾರೆ ಎಂದು ವರದಿಯಾಗಿದೆ.
ದೇಶದಲ್ಲಿ ದಂಗೆಯೆದ್ದ ಹೊರತು ಮೋದಿ ಅಧಿಕಾರ ಬಿಡುವುದಿಲ್ಲ ಎಂದು ತಾನು ಹೇಳಿದ್ದೆಂದೂ, ತನ್ನ ಅರ್ಧ ವಾಕ್ಯ ಮಾತ್ರ ಕೇಳಿ ತಪ್ಪು ತಿಳುವಳಿಕೆಯಾಗಿದೆ ಎಂದೂ ಸಂತೋಷ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.