
2025-26ನೇ ಸಾಲಿನಲ್ಲಿ ರಾಜ್ಯದ 1,250 ಸರ್ಕಾರಿ ಶಾಲೆಗಳಲ್ಲಿ 1,582 ಶೌಚಾಲಯಗಳನ್ನು ನಿರ್ಮಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ 544 ಲಕ್ಷ ರೂ. ಹಾಗೂ ಪಿ.ಎಂ ಶ್ರೀ ಯೋಜನೆಯಡಿ 216 ಕೊಠಡಿಗಳಿಗೆ 4,854.60 ಲಕ್ಷ ರೂ. ಮಂಜೂರಾಗಿದೆ.
ಹಿರೇಕೆರೂರು ಕ್ಷೇತ್ರದ 9 ಶಾಲೆಗಳಲ್ಲಿ 15 ಶೌಚಾಲಯ ನಿರ್ಮಾಣಕ್ಕೆ 30 ಲಕ್ಷ ರೂ. ವೆಚ್ಚದ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದ್ದಾರೆ.