
ಕರ್ನಾಟಕದ ಪ್ರಮುಖ ಹೂಡಿಕೆ ಸಂಸ್ಥೆಯಾದ ಜೆರೋಧಾದಲ್ಲಿ ಹುಟ್ಟಿದ ಕೇವಲ 28 ದಿನಗಳಾದ ಪುಟ್ಟ ಮಗುವಿನ ಹೆಸರಿನಲ್ಲಿ ಡಿಮ್ಯಾಟ್ ಖಾತೆ ತೆರೆಯಲಾಗಿದ್ದು, ಸಹ-ಸಂಸ್ಥಾಪಕ ನಿತಿನ್ ಕಾಮತ್ ಮಾಹಿತಿ ಹಂಚಿಕೊಂಡಿದ್ದಾರೆ.
ಅಕೌಂಟ್ ತೆರೆದ ಕೇವಲ ಒಂದೇ ವಾರದಲ್ಲಿ ಪೋಷಕರು ಆ ಮಗುವಿನ ಹೆಸರಿನಲ್ಲಿ ಮೊದಲ ಹೂಡಿಕೆಯನ್ನು ಪೂರ್ಣಗೊಳಿಸಿದ್ದು, ಕಳೆದ ವರ್ಷದ 64 ದಿನಗಳ ಮಗುವಿನ ದಾಖಲೆಯನ್ನು ಮುರಿದಿದೆ.
ಮಕ್ಕಳಿಗೆ ಬಾಲ್ಯದಿಂದಲೇ ಆರ್ಥಿಕ ಸಾಕ್ಷರತೆ ಮತ್ತು ಹೂಡಿಕೆಯ ಅಭ್ಯಾಸ ರೂಢಿಸಲು ಪೋಷಕರು ಇಂತಹ ಹೆಜ್ಜೆ ಇಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ.