
ಅಂತರರಾಷ್ಟ್ರೀಯ ನಿರ್ಬಂಧಗಳು ಮತ್ತು ತೀವ್ರ ಹಣದುಬ್ಬರದಿಂದಾಗಿ ಇರಾನ್ನ ಕರೆನ್ಸಿ ರಿಯಾಲ್ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಒಂದು ಯುಎಸ್ ಡಾಲರ್ಗೆ 2.02 ಮಿಲಿಯನ್ ರಿಯಾಲ್ ಮೌಲ್ಯಕ್ಕೆ ತಲುಪಿದೆ.
ಕರೆನ್ಸಿ ಮೌಲ್ಯ ಕುಸಿತದಿಂದಾಗಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಇರಾನ್ ಸರ್ಕಾರವು ತಿಂಗಳ ಕನಿಷ್ಠ ವೇತನವನ್ನು 166 ಮಿಲಿಯನ್ ರಿಯಾಲ್ಗೆ ಹೆಚ್ಚಿಸಲು ಕಟ್ಟುಪಾಡು ಮಾಡಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ 20 ಲಕ್ಷ ರಿಯಾಲ್ ಹಣಕ್ಕೆ 2 ಕೆಜಿ ಟೊಮೆಟೊ ಕೂಡ ಸಿಗದಷ್ಟು ಬೆಲೆ ಏರಿಕೆಯಾಗಿದ್ದು, ಸಾಮಾನ್ಯ ನಾಗರಿಕರು ದೈನಂದಿನ ಜೀವನೋಪಾಯಕ್ಕಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.