
ಯಾದಗಿರಿ ನಗರದ ಬಸವೇಶ್ವರ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮಳೆ ಕೊರತೆಯಿಂದ ಕೊಳವೆ ಬಾವಿಗಳ ಅಂತರ್ಜಲ ಕುಸಿದಿದ್ದು, ಕಳೆದ ಎರಡು ಮೂರು ತಿಂಗಳಿಂದ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ.
ನಗರದ ಸಮೀಪವೇ ಭೀಮಾ ನದಿ ಹರಿಯುತ್ತಿದ್ದರೂ ನಗರಸಭೆಯಿಂದ ನೀರಿನ ವ್ಯವಸ್ಥೆಯಾಗದೆ, ನಿವಾಸಿಗಳು ದೇವರ ಪೂಜೆಗೂ ಹಳಸಲು ನೀರನ್ನು ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಾಕ್ ವೆಲ್ ಮೋಟಾರ್‌ನಲ್ಲಿ ತಾಂತ್ರಿಕ ಸಮಸ್ಯೆಯಾಗಿರುವುದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ಶೀಘ್ರವೇ ಸಮಸ್ಯೆ ಪರಿಹರಿಸಿ ನೀರು ಸರಬರಾಜು ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ತಿಳಿಸಿದ್ದಾರೆ.