
ಬೆಂಗಳೂರು-ಮುಂಬೈ ನಡುವೆ ಸಂಚರಿಸಲಿರುವ 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ನೈಋತ್ಯ ರೈಲ್ವೆ ಸ್ವೀಕರಿಸಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ.
ಬೆಂಗಳೂರಿನ ಬಿಇಎಂಎಲ್‌ನಲ್ಲಿ ನಿರ್ಮಿಸಲಾದ ಈ ರೈಲಿನಲ್ಲಿ 11 ತ್ರೀ-ಟಯರ್ ಎಸಿ, ನಾಲ್ಕು 2-ಟಯರ್ ಎಸಿ ಮತ್ತು ಒಂದು ಫಸ್ಟ್ ಕ್ಲಾಸ್ ಎಸಿ ಕೋಚ್‌ಗಳಿದ್ದು, ಪ್ರಯಾಣಕ್ಕೆ ಸುಮಾರು 16 ಗಂಟೆ ತಗುಲಲಿದೆ.
ಈ ರೈಲು 1,137 ಕಿ.ಮೀ ಮಾರ್ಗದಲ್ಲಿ ಸಂಚರಿಸಲಿದ್ದು, 3ಎಸಿ ಟಿಕೆಟ್ ದರವು ಊಟದೊಂದಿಗೆ ಸುಮಾರು 3,000 ರೂ. ಇರಬಹುದೆಂದು ನಿರೀಕ್ಷಿಸಲಾಗಿದೆ.