
ದೆಹಲಿ ಮೆಟ್ರೋ ನಿಲ್ದಾಣದಲ್ಲಿ ಪೋಷಕರಿಂದ ತಪ್ಪಿಸಿಕೊಂಡ ಪುಟ್ಟ ಬಾಲಕನನ್ನು CISF ಯೋಧರೊಬ್ಬರು ಪೋಷಕರಿಗೆ ತಲುಪಿಸುವ ಭಾವನಾತ್ಮಕ ವಿಡಿಯೋ ವೈರಲ್ ಆಗಿದೆ.
CISF ಯೋಧರು ಮಗುವಿನ ಪೋಷಕರು ಪತ್ತೆಯಾಗುವವರೆಗೂ ಮಗುವನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡು ಧೈರ್ಯ ತುಂಬಿದ್ದಾರೆ.
ಈ ಹೃದಯಸ್ಪರ್ಶಿ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಭದ್ರತಾ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.