
ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ 100 ಪ್ರಭಾವಿ ಭಾರತೀಯರ ಪಟ್ಟಿಯಲ್ಲಿ ನಟ ರಿಷಬ್ ಶೆಟ್ಟಿ, ಲೇಖಕಿ ಬಾನು ಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಾಸ್ತಿ ಸ್ಥಾನ ಪಡೆದಿದ್ದಾರೆ.
2025ರ ಜನವರಿ 1ರಿಂದ 2026ರ ಮಾರ್ಚ್ 31ರ ಅವಧಿಯಲ್ಲಿ ಸಮಾಜದ ಮೇಲೆ ಬೀರಿದ ಪ್ರಭಾವವನ್ನು ಆಧರಿಸಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಬಾನು ಮುಷ್ತಾಕ್ ಅವರ 'ಎದೆಯ ಹಣತೆ' ಕೃತಿಯು ಬೂಕರ್ ಪ್ರಶಸ್ತಿಗೆ ಭಾಜನವಾಗಿದ್ದು, ಅದನ್ನು ಇಂಗ್ಲಿಷ್ಗೆ ಅನುವಾದಿಸಿದ ದೀಪಾ ಭಾಸ್ತಿ ಅವರ ಸಾಧನೆಯನ್ನು ಫೋರ್ಬ್ಸ್ ಗುರುತಿಸಿದೆ.