
ಉತ್ತರ ಕನ್ನಡ ಜಿಲ್ಲೆಯ 219 ಗ್ರಂಥಾಲಯ ಮೇಲ್ವಿಚಾರಕರಿಗೆ ಕಳೆದ 17 ತಿಂಗಳಿಂದ ಹೆಚ್ಚುವರಿ ವೇತನ ಸಿಗುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
ನಿಯಮದ ಪ್ರಕಾರ 12 ಸಾವಿರ ರೂ. ಗೌರವಧನದ ಜೊತೆಗೆ ಜಿಲ್ಲಾ ಪಂಚಾಯತ್‌ನ ತೆರಿಗೆ ವಸೂಲಿ ಅನುದಾನದಿಂದ 7,200 ರೂ. ಹೆಚ್ಚುವರಿ ವೇತನ ನೀಡಬೇಕಿತ್ತು.
ಒಂದು ತಿಂಗಳ ಒಳಗಾಗಿ ವೇತನ ತಾರತಮ್ಯದ ಸಮಸ್ಯೆಯನ್ನು ಬಗೆಹರಿಸದಿದ್ದರೆ ಜಿಲ್ಲಾ ಪಂಚಾಯತ್ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುವುದಾಗಿ ಸಿಬ್ಬಂದಿ ಎಚ್ಚರಿಸಿದ್ದಾರೆ.