
ಕನ್ನಡದಲ್ಲಿ ಸಂಗೀತ, ನೃತ್ಯ ಮತ್ತು ಭಾವನೆಗಳನ್ನು ಒಗ್ಗೂಡಿಸಿರುವ ‘ಮನ ಮನ ಮಿಡಿದಿದೆ’ ಎಂಬ ಹೊಸ ಆಲ್ಬಂ ಹಾಡು ಬಿಡುಗಡೆಗೊಂಡಿದೆ.
ಜೀವನ್ ಹಳ್ಳಿಕಾರ್ ಈ ಹಾಡಿನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಸಾಹಿತ್ಯ ರಚನೆ, ನೃತ್ಯ ಸಂಯೋಜನೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ಈ ಆಲ್ಬಂ ಹಾಡಿಗೆ ಸಿದ್ಧಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದು, ಸಾಕ್ಷಿ ಭಾಗವತ್ ಹಾಗೂ ಸಿದ್ಧಾರ್ಥ್ ಕಾಮತ್ ಧ್ವನಿ ನೀಡಿದ್ದಾರೆ.