
ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಬೋಡಗುಂಡ್ಲಹಳ್ಳಿ ಗ್ರಾಮದ ಮನೆ ಮೇಲೆ ಬಟ್ಲಹಳ್ಳಿ ಠಾಣೆಯ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಒಂದು ನಾಡಬಂದೂಕು ಹಾಗೂ 150ಕ್ಕೂ ಹೆಚ್ಚು ನಾಡಬಾಂಬ್ ಜಪ್ತಿ ಮಾಡಲಾಗಿದ್ದು, ಗ್ರಾಮದ ನಿವಾಸಿ ನರಸಿಂಹಪ್ಪನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.