International
ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಡ್ರೋನ್ ದಾಳಿ: 10 ನಾಗರಿಕರ ಸಾವು

ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಡ್ರೋನ್ ದಾಳಿ: 10 ನಾಗರಿಕರ ಸಾವು

prajavani2h
THE BRIEF
1

ರಷ್ಯಾ ರಾಜಧಾನಿ ಮಾಸ್ಕೊ ಮತ್ತು ಸುತ್ತಮುತ್ತ ಉಕ್ರೇನ್ ನಡೆಸಿದ ಡ್ರೋನ್ ದಾಳಿಗೆ 5 ಮಂದಿ ಹಾಗೂ ರಷ್ಯಾ ನಡೆಸಿದ ವೈಮಾನಿಕ ದಾಳಿಗೆ ಉಕ್ರೇನ್‌ನ 5 ನಾಗರಿಕರು ಮೃತಪಟ್ಟಿದ್ದಾರೆ.

2

ರಷ್ಯಾದ ಅರ್ಖಿಪೊ-ಒಸಿಪೊವ್ಕಾದ ಬ್ಲ್ಯಾಕ್ ಸೀ ರೆಸಾರ್ಟ್ ಮೇಲೆ ಸೋಮವಾರ ರಾತ್ರಿ ಉಕ್ರೇನ್ ನಡೆಸಿದ ದಾಳಿಯಲ್ಲಿ ಮೂವರು ಮಕ್ಕಳು ಸೇರಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದ್ದು, 58 ಮಂದಿ ಗಾಯಗೊಂಡಿದ್ದಾರೆ.

3

ರಷ್ಯಾ ದಾಳಿಯಿಂದ ಉಕ್ರೇನ್‌ನ ಒಡೆಸಾ ಪ್ರಾಂತ್ಯದ ಕ್ರೊನೊಮೊರ್ಸ್ಕ್ ಬಂದರು ಮತ್ತು ಮೈಕೊಲೈವ್‌ನಲ್ಲಿ ಸೇನಾ ಸರಕು ಸಾಗಿಸಲು ಸಜ್ಜಾಗಿದ್ದ ಹಡಗಿಗೆ ತೀವ್ರ ಹಾನಿಯಾಗಿದೆ ಎಂದು ಉಕ್ರೇನ್ ಖಚಿತಪಡಿಸಿದೆ.