
ಬೆಂಗಳೂರಿನ ಲಾಲ್ಬಾಗ್ನಲ್ಲಿ ನಡೆಯುತ್ತಿರುವ 220ನೇ ಫಲ ಪುಷ್ಪ ಪ್ರದರ್ಶನವು ಕಳೆದ 11 ದಿನಗಳಲ್ಲಿ 9.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ.
ಈ ಪ್ರದರ್ಶನದಿಂದ ಇದುವರೆಗೆ ಒಟ್ಟಾರೆಯಾಗಿ 3 ಕೋಟಿ ರೂ.ಗೂ ಅಧಿಕ ಆದಾಯ ಹರಿದುಬಂದಿದ್ದು, ಸ್ವಾತಂತ್ರ್ಯ ದಿನಾಚರಣೆಯಂದು ಒಂದೇ ದಿನ 1.05 ಕೋಟಿ ರೂ. ಸಂಗ್ರಹವಾಗಿದೆ.
ಗಂಗಾ ಸಾಮ್ರಾಜ್ಯದ ಇತಿಹಾಸವನ್ನು ಸಾರುವ ಈ ಪ್ರದರ್ಶನವು ಭಾನುವಾರವೂ ಜನಜಂಗುಳಿಯಿಂದ ಕೂಡಿದ್ದು, ಸೋಮವಾರದಂದು ಅಧಿಕೃತವಾಗಿ ತೆರೆಬೀಳಲಿದೆ.