
ಬಾಗಲಕೋಟೆ ಜಿಲ್ಲೆಯ ಇಳಕಲ್‌ನ ಜಿಯೋ ಪೆಟ್ರೋಲ್ ಬಂಕ್‌ನಲ್ಲಿ ರಿವರ್ಸ್ ತೆಗೆಯುವಾಗ ಬ್ರೇಕ್ ಬದಲಿಗೆ ಎಕ್ಸಲೇಟರ್ ತುಳಿದಿದ್ದರಿಂದ ಕಾರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದೆ.
ಬಸನಗೌಡ ಮತ್ತು ಸಿದ್ದನಗೌಡ ಎಂಬ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಡಿಕ್ಕಿ ಬಳಿಕ ಕಾರು ಇಂಧನ ಡಿಸ್ಪೆನ್ಸರ್‌ಗೆ ಅಪ್ಪಳಿಸಿದ್ದು, ಸಿಬ್ಬಂದಿ ತಕ್ಷಣ ನೀರು ಸಿಂಪಡಿಸಿ ಬೆಂಕಿ ಹೊತ್ತಿಕೊಳ್ಳದಂತೆ ತಡೆದಿದ್ದರಿಂದ ಭಾರೀ ಸ್ಫೋಟ ತಪ್ಪಿದೆ.