
2024-25ನೇ ಸಾಲಿನಲ್ಲಿ ಯುನೈಟೆಡ್ ಬ್ರೂವರೀಸ್ ಲಿಮಿಟೆಡ್ (ಯುಬಿಎಲ್) ಸಂಸ್ಥೆಯು ಕರ್ನಾಟಕದ ಆರ್ಥಿಕತೆಗೆ ಒಟ್ಟು ₹4,500 ಕೋಟಿ ಮೌಲ್ಯದ ಕೊಡುಗೆ ನೀಡಿದೆ ಎಂದು ಹೊಸ ವರದಿ ತಿಳಿಸಿದೆ.
ಈ ಸಂಸ್ಥೆಯು ನೇರ ಮತ್ತು ಪರೋಕ್ಷವಾಗಿ ರಾಜ್ಯದಲ್ಲಿ ಒಟ್ಟು 36,400 ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದು, ಇದು ರಾಜ್ಯದ ಜಿಡಿಪಿಯ ಶೇ 0.2ರಷ್ಟಾಗಿದೆ.
ವಹಿವಾಟಿನ ಮೂಲಕ ಯುಬಿಎಲ್ ಸಂಸ್ಥೆಯು ರಾಜ್ಯ ಸರ್ಕಾರಕ್ಕೆ ಅಂದಾಜು ₹3,100 ಕೋಟಿ ತೆರಿಗೆ ಪಾವತಿಸಿದ್ದು, ಸ್ಥಳೀಯ ಸರಬರಾಜುದಾರರಿಂದ ₹300 ಕೋಟಿ ಮೌಲ್ಯದ ಸರಕು ಖರೀದಿಸಿದೆ.